spot_img
spot_img

ಸತ್ಯದ ದಾರಿ ಹಿಡಿದಾಗ ಹೆಚ್ಚು ಜ್ಞಾನವಿರುತ್ತದೆ

Must Read

- Advertisement -

“ಭಾರತೀಯರಲ್ಲಿ ಒಂದು ದೋಷವಿದೆ ನಮ್ಮ ಅಧಿಕಾರವನ್ನು ನಮ್ಮರಲ್ಲಿ ಹಂಚಿಕೊಳ್ಳದಿರೋದು.ನಮ್ಮ ನಂತರ ಏನಾಗಬಹುದೆನ್ನುವುದರ ಚಿಂತನೆ ನಡೆಸದಿರೋದು” ಈ ವಾಕ್ಯಗಳನ್ನು ಸ್ವಾಮಿ ವಿವೇಕಾನಂದರು ಸ್ವಾತಂತ್ರ್ಯ ಪೂರ್ವದ ಭಾರತೀಯರಿಗೆ ತಿಳಿಸಿರುವುದಾಗಿದೆ.

ಆದರೆ ಈಗಲೂ‌ ಭಾರತೀಯರು ತಮ್ಮ ಆ ದೋಷವನ್ನು ಬಿಡದೆ ಅಧಿಕಾರಕ್ಕಾಗಿ ನಮ್ಮವರನ್ನೇ ಶತ್ರುಗಳನ್ನಾಗಿಸಿಕೊಂಡು ಪರಕೀಯರಿಗೆ ಮಣೆ ಹಾಕಿ ಪ್ರಗತಿಪರ ದೇಶ ಎನ್ನುತ್ತಿದ್ದಾರೆಂದರೆ ನಾವು ಬದಲಾವಣೆ ಕಾಣುತ್ತಿರುವುದು ವೈಜ್ಞಾನಿಕ ಕ್ಷೇತ್ರದಿಂದ, ಆಧ್ಯಾತ್ಮ ಕ್ಷೇತ್ರದಲ್ಲಿಯೂ ಅಧಿಕಾರಕ್ಕಾಗಿ ಸತ್ಯ, ಧರ್ಮವನ್ನು ಬಿಟ್ಟು ವ್ಯವಹಾರಕ್ಕೆ ಇಳಿದಿರುವಾಗ ರಾಜಕೀಯತೆಯೆ ರಾಜಯೋಗವನ್ನು ಹಿಂದಿಟ್ಟಿದೆ.

ನಮ್ಮಲ್ಲಿ ದೋಷವನ್ನು ಹುಡುಕಿಕೊಳ್ಳಲು ಕಷ್ಟ. ಆದರೆ ಇದನ್ನು ಪರಮಾತ್ಮನು ನಮ್ಮವರಿಂದಲೇ ತಿಳಿಸುವುದನ್ನು ಅರ್ಥ ಮಾಡಿಕೊಂಡು ನಡೆಯುವುದಕ್ಕೆ ನಮಗೆ ಆತ್ಮಜ್ಞಾನ ಬೇಕು.

- Advertisement -

ಆಧ್ಯಾತ್ಮ ವಿಚಾರಗಳಿಂದ ಜ್ಞಾನ ಹೆಚ್ಚಾಗುತ್ತದೆ. ವಿದ್ಯೆಗಿಂತ ಜ್ಞಾನವೇ ಮುಖ್ಯ. ಎಂದರೆ ವಿದ್ಯೆಯನ್ನು ಸದ್ಬಳಕೆ ಮಾಡಿಕೊಂಡು ಸತ್ಯದ ದಾರಿ ಹಿಡಿದಾಗ ಹೆಚ್ಚು ಜ್ಞಾನವಿರುತ್ತದೆ.ಇದಕ್ಕೆ ಹಿಂದಿನ ಶಿಕ್ಷಣ ಪದ್ದತಿ ಅಗತ್ಯ.

ಸತ್ಯವಿಲ್ಲದೆ ಟೊಳ್ಳಾಗಿರುವ ಶಿಕ್ಷಣಪಡೆದವರಿಗೆ ಬೌತಿಕ ರಾಜಕೀಯವಷ್ಟೆ ಮುಖ್ಯ. ಆಧ್ಯಾತ್ಮ ದಲ್ಲಿ ಯಾರನ್ನೋ ಯಾರೋ ಆಳುವುದರಿಂದ ರಾಜಯೋಗ ಸಿಗುವುದಾಗಿದ್ದರೆ ಈಗ ನಾವೆಲ್ಲರೂ ರಾಜಯೋಗಿಗಳೆ. ಯೋಗ್ಯ ವಿಚಾರ ಬಿಟ್ಟು ,ಅಯೋಗ್ಯರಿಂದ ಶಿಕ್ಷಣ ಪಡೆದು ಮಕ್ಕಳನ್ನು ಯೋಗದೆಡೆಗೆ ನಡೆಸುವುದು ಕಷ್ಟ.

ಭಾರತವನ್ನು ಆಳಿದ ಮಹಾರಾಜರುಗಳ ಕ್ಷತ್ರಿಯ ಧರ್ಮವನ್ನು ಅರ್ಥ ಮಾಡಿಕೊಳ್ಳಲು ಪ್ರಜಾಪ್ರಭುತ್ವದ ಪ್ರಜೆಗಳಿಗೆ ಕಷ್ಟ. ಅಂದಿನ ವರ್ಣ ಪದ್ದತಿಯನ್ನು ಕರ್ಮದ ಆಧಾರದ ಮೇಲೆ ಬೆಳೆಸಲಾಗಿತ್ತು.

- Advertisement -

ಇಂದಿನ ಜಾತಿ ಪದ್ದತಿ ರಾಜಕೀಯವಾಗಿ ಬೆಳೆಸಲಾಗಿರೋದು ನಿಜವಾದ l ಮಕ್ಕಳ ಜ್ಞಾನಶಕ್ತಿ‌ ಗುರುತಿಸುವುದಕ್ಕೆ ಕಷ್ಟ ಆಗಿದ್ದು ಬಡತನವನ್ನು ಹಣದಿಂದ ಅಳೆಯೋದರಿಂದ ಸೋಮಾರಿಗಳಿಂದ ಮಾರಿ ಅಥವಾ ರೋಗ ಹೆಚ್ಚಾಗಿದೆ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಹಾಲವಾಣ(ಹೊಂಗಾರಕ)

ಸಣ್ಣ ವಯಸ್ಸಿನಲ್ಲಿ ಕೈಗೆ ಮದರಂಗಿ ಕಟ್ಟಲು ಬಳಸುತ್ತಿದ್ದ ಎಲೆ ಹಾಲವಣ. ಇದರ ಬಳಕೆ ಒಂದೇ ಎರಡೇ. ರೈತರ ಹೊಲದಲ್ಲಿ ನೆಟ್ಟು ಎಲೆ ಬಳ್ಳಿ ಮೆಣಸಿನ ಬಳ್ಳಿ ಹಬ್ಬಿಸಲು....
- Advertisement -

More Articles Like This

- Advertisement -
close
error: Content is protected !!
Join WhatsApp Group