spot_img
spot_img

ಮಕ್ಕಳ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯಕ ಅಕ್ಷರ ದಾಸೋಹ – ಶ್ರೀಶೈಲ ಕರೀಕಟ್ಟಿ

Must Read

ಸವದತ್ತಿಃ ಮಧ್ಯಾಹ್ನ ಉಪಾಹಾರ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಮಹಿಳೆಯೊಬ್ಬರು ತಾಲೂಕಿನ ಅಕ್ಷರದಾಸೋಹ ಸಹಾಯಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದು ಸಂತೋಷ. ಇದು ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಯ ಜೊತೆಗೆ ಉತ್ತಮ ಗುಣಮಟ್ಟದ ಆಹಾರ ಒದಗಿಸುವುದಾಗಿದೆ. ಇದರೊಂದಿಗೆ ಈ ಕಾರ್ಯಕ್ರಮದ ಅನುಷ್ಠಾನದಲ್ಲಿ ಹೆಚ್ಚಿನ ಕಾಳಜಿ,ಜವಾಬ್ದಾರಿ ವಹಿಸುವುದು ಕೂಡ ಮುಖ್ಯ. ಮಕ್ಕಳಲ್ಲಿನ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಕ್ಷರ ದಾಸೋಹ ಸಹಾಯಕವಾಗಿದ್ದು. ತಾವು ಆ ನಿಟ್ಟಿನಲ್ಲಿ ತಾಲೂಕಿನ ಎಲ್ಲ ಶಾಲೆಗಳಲ್ಲಿ ಈ ಯೋಜನೆ ಸಮರ್ಪಕವಾಗಿ ಜರುಗಲು ಹೆಚ್ಚಿನ ಕಾಳಜಿ ವಹಿಸಿ ಎಂದು ನೂತನವಾಗಿ ಅಕ್ಷರದಾಸೋಹ ಸಹಾಯಕ ನಿರ್ದೇಶಕರಾಗಿ ಸವದತ್ತಿ ತಾಲೂಕಿಗೆ ಅಧಿಕಾರ ವಹಿಸಿಕೊಂಡ ಶ್ರೀಶೈಲ ಕರಿಕಟ್ಟಿ ಹೇಳಿದರು.

ಅವರು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಮೈತ್ರಾದೇವಿ ವಸ್ತ್ರದ ಅವರ ಸ್ವಾಗತ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ, ತಾಲೂಕು ಪಂಚಾಯತಿಯ ಬಡೆಮ್ಮಿ, ಅರ್ಟಗಲ್ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಮಮತಾ ಬಣಕಾರ, ಬಿ.ಆರ್.ಪಿಗಳಾದ ರತ್ನಾ ಸೇತಸನದಿ, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವೈ.ಬಿ.ಕಡಕೋಳ, ಎಸ್.ಬಿ.ಬೆಟ್ಟದ ಮುರಕಿಬಾಬಿ ಪ್ರೌಢಶಾಲೆಯ ಆರ್.ಸಿ.ಕಂಠಿ, ಬೈಲಹೊಂಗಲದ ಸರಕಾರಿ ಪ್ರೌಢಶಾಲೆಯಬಿ ಆರ್.ಪಾಟೀಲ ಬಾವೀಹಾಳ ಪ್ರೌಢಶಾಲೆಯ ಆರ್.ಸಿ.ಕಡಕೋಳ, ಮೇಕಲಮರ್ಡಿ ಪ್ರೌಢಶಾಲೆಯ ವಿವಿಧ ಗುರುಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮೈತ್ರಾದೇವಿ ವಸ್ತ್ರದ, ಇದು ನನ್ನ ಸೌಭಾಗ್ಯ ಅಕ್ಷರದಾಸೋಹ ಯೋಜನೆಯ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವ ಜೊತೆಗೆ ಮಕ್ಕಳ ಕಲಿಕಾ ಚಟುವಟಿಕೆಗಳನ್ನು ಕೂಡ ಗಮನಿಸುವೆನು.ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಸಹಕಾರ ಕೂಡ ನನಗಿರಲಿ ಎಂದು ಕೃತಜ್ಞತಾ ನುಡಿಗಳನ್ನು ಹೇಳಿದರು.

ರತ್ನಾ ಸೇತಸನದಿ ಕಾರ್ಯಕ್ರಮ ನಿರೂಪಿಸುವುದರೊಂದಿಗೆ ವೈ.ಬಿ.ಕಡಕೋಳ ಸ್ವಾಗತಿಸಿದರು ಎಸ್.ಬಿ.ಬೆಟ್ಟದ ವಂದನಾರ್ಪಣೆಗೈದರು.

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!